ಅನುಪಮ [೧೯೮೧]
ಗಾಯಕರು : ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮ್ಹಣ್ಯಂ
ಗೀತ ರಚನೆ : ಪ್ರೊ. ದೊಡ್ಡರಂಗೇ ಗೌಡ
ಸಂಗೀತ : ಅಶ್ವಥ್ - ವೈದಿ
ಜಾನಕಿ : ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನಾ ಪ್ರೇಮ ಗಾನ ಸಂಜೀವನ (೨)
ಜಾನಕಿ : ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯಾ ತೂಗಿ ಸನಿಹ ಬಂದೆ
ಎಲ್ಲಾ ಪ್ರೀತಿ ಸಂಮೋಹಗೊಂಡೆ
ಹರುಷ ತಂದ ಹಾದಿಯೇ ಚೆಂದ (೨)
ಒಲವಿನಾಸರೆ ರೋಮಾಂಚ ಬಂಧ
ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನಾ ಪ್ರೇಮ ಗಾನ ಸಂಜೀವನ
ಎಸ್.ಪಿ.ಬಿ : ಜೊತೆಯಾ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು , ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ಜಾನಕಿ : ನಿನಗೆ ನಾನು ನನಗೆ ನೀನು
ಇಬ್ಬರೂ : ಪ್ರೇಮ ಜೀವನ ಎಂದೆಂದೂ ಜೇನು
ಜಾನಕಿ : ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನಾ ಪ್ರೇಮ ಗಾನ ಸಂಜೀವನ (೨)
ಸಂಜೀವನಾ [೩]
![]() |
| ಪ್ರೊ. ದೊಡ್ಡರಂಗೇ ಗೌಡ |
![]() |
| ವೈದಿ - ಅಶ್ವಥ್ |




No comments:
Post a Comment