
ಚಿತ್ರ : ಮಹಾಸತಿ ಅನುಸೂಯ [೧೯೬೫]
ಗಾಯಕರು : ಎಲ್.ಆರ್.ಈಶ್ವರೀ , ಡಾ|ಪಿ.ಬಿ.ಶ್ರೀನಿವಾಸ್
ಸಾಹಿತಿ : ಚಿ.ಉದಯಶಂಕರ್
ಸಂಗೀತ : ಎಸ್.ಹನುಮಂತ ರಾವ್
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ [೨]
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ
ಬಾಳಬೆಳಕು ಬೆಳಗಲೆಂದು ಸೃಷ್ಟಿ ಸೊಬಗ ನೋಡಲೆಂದು [೨]
ತಾಯಿ ಮಡಿಲ ತುಂಬಿ ಬಂದ ದೇವದೇವರೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ ||೧||
ಭುವಿಯೇ ಸ್ವರ್ಗ ಮಾಡಲೆಂದು ಇಳೆಗೆ ಇಳಿದು ಬಂದು ಇಂದು [೨]
ನನ್ನ ಧನ್ಯಳಾಗಿ ಮಾಡಿದ ಲೋಕಪಾಲರೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ ||೨||
ವನಮಾಲೀ ಕೇಶವನೇ ಘನಶೂಲಿ ಸದಾಶಿವನೇ [೨]
ಕಮಲಾಸನ ವಾಗೀಶನೇ ತ್ರಿಮೂರ್ತಿಗಳೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ ||೩||
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ
No comments:
Post a Comment